09 March 2007

ವಾ(ಹ್)ನರ

ಚಿಂಪಾಂಜಿಗಳು ಸಸ್ಯಾಹಾರಿಗಳು. ಅವುಗಳ ಮುಖ್ಯ ಆಹಾರ ಎಲೆ, ಹಣ್ಣು-ಹಂಪಲು, ಇತ್ಯಾದಿ. ಅವು ಯಾವಾಗಲೂ ತಮ್ಮ ಆಹಾರವನ್ನು ಚೆನ್ನಾಗಿ ಅಗಿದು ನುಂಗುತ್ತವೆ. ಆದರೆ ತಾಂಜಾನಿಯಾದಲ್ಲಿ ವಿಜ್ಞಾನಿಗಳು ಒಂದು ವಿಚಿತ್ರವನ್ನು ಕಂಡರು. ಅಲ್ಲಿನ ಚಿಂಪಾಂಜಿಗಳು ಅಸ್ಪಿಲಿಯ ಎಂಬ ಸಸ್ಯದ ಎಲೆಗಳನ್ನು ಅಗಿಯದೆ ಪೂರ್ಣವಾಗಿ ನುಂಗುವುದು ಕಂಡು ಬಂದಿತು.

ಆ ಸಸ್ಯದ ಎಲೆಗಳು ಒಂದು ಬಗೆಯ ಕೆಂಪು ತೈಲವನ್ನು ಹೊಂದಿವೆ. ಆ ಎಣ್ಣೆ ಬ್ಯಾಕ್ಟೀರಿಯ ಹಾಗೂ ಪರಾವಲಂಬಿ ಜಂತುಗಳನ್ನು ನಾಶ ಮಾಡುವ ಗುಣ ಹೊಂದಿದೆ. ಎಲೆಗಳನ್ನು ಅಗಿಯುವುದರಿಂದ ಜಠರ ತಲುಪುವದರಷ್ಟರಲ್ಲಿ ಅವು ಜೀರ್ಣಗೊಂದು ಅದರ ಔಷಧೀಯ ಗುಣಗಳು ಬೇಗನೆ ನಾಶಗೊಳ್ಳಬಹುದು. ಎಲೆಗಳನ್ನು ಅಗಿಯದೆ ಹಾಗೆಯೆ ನುಂಗುವುದರಿಂದ ಹೆಚ್ಚು ಸಮಯ ಅಂದರೆ ಕರುಳಿನವರೆಗೆ ಹೋಗುವರಷ್ಟು ಸಮಯ ಅದರ ಔಷಧೀಯ ಗುಣಗಳನ್ನು ಕಾಪಾಡಬಹುದು. ಹೆಚ್ಚು ಪರಾವಲಂಬಿ ಜಂತುಗಳು ವಾಸವಾಗಿರುವ ಕರುಳಿನಲ್ಲಿಯೇ ಆ ಔಷಧದ ಅಗತ್ಯ ಹೆಚ್ಚು.

ಹೇಗಿದೆ ಚಿಂಪಾಂಜಿಗಳ ಜ್ಞಾನ!

08 March 2007

ನನ್ನ ಮೊದಲ ಬ್ಲಾಗ್

ತಲೆಯಲ್ಲಿ ಬರುವ ನಾನಾ ವಿಚಾರಗಳನ್ನು ಕಲೆ ಹಾಕಲು ಈ ಬ್ಲಾಗ್ ವಿಧಾನ ಅತ್ಯುತ್ತಮವೆಂದು ನನ್ನ ಅಭಿಪ್ರಾಯ. ತುಂಬಾ ದಿನಗಳಿಂದ ಏನೋ ಬ್ಲಾಗಿಸಬೇಕೆಂದು ತಲೆಯಲ್ಲಿ ಹುಳ ಕೊರೆಯುತ್ತಿತ್ತು. ಆ ಆಸೆ ಈಗ ನೆರವೇರಿದೆ. ನನ್ನ ಮೊದಲ ಬ್ಲಾಗ್ ತಯಾರಾಗಿದೆ. ಇನ್ನು ಮುಂದೆ ಏನಿದ್ದರೂ ಅದನ್ನು ಸಮಯಕ್ಕೆ ತಕ್ಕಂತೆ ನನ್ನ ದಿನಚರಿಯ ಹಾಗೆ ತುಂಬುವುದು.